ಭೀಮಾಶಂಕರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿರುವ ಭಾರತದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು.

ಪುರಾಣಗಳ ಪ್ರಕಾರ, ಇಲ್ಲಿ ಭೀಮಾಸುರ ಎಂಬ ಅಸುರನು ತಪಸ್ಸಿನಿಂದ ಪಡೆದ ಶಕ್ತಿಯಿಂದ ಲೋಕವನ್ನು ಕಾಡುತ್ತಿದ್ದನು. ಭಕ್ತರು ಈ ಭೀಮಾಸುರನೆಂಬ ರಾಕ್ಷಸ ನಿಂದ ತಮ್ಮನ್ನು ಕಾಪಾಡಬೇಕು ಎಂದು ಶಿವನನ್ನು ಕೇಳಿಕೊಂಡಾಗ,
ಭಕ್ತರ ಬೇಡಿಕೆಯಂತೆ, ಶಿವನು ಭೀಮಾಸುರನನ್ನು ಸಂಹರಿಸಿ  ಈ ಪವಿತ್ರ ಸ್ಥಳದಲ್ಲಿ ಭೀಮಾಶಂಕರ ಜ್ಯೋತಿರ್ಲಿಂಗವಾಗಿ ಸ್ಥಿರನಾದನು.  


ಭೀಮಾಶಂಕರದ ಜ್ಯೋತಿರ್ಲಿಂಗದ ಇನ್ನೊಂದು ವಿಶೇಷ ಏನಪ್ಪಾ  ಅಂದ್ರೆ ಇಲ್ಲಿ ಅಭಿಷೇಕ ನಡೆಯುವ ವೇಳೆಯಲ್ಲಿ ಲಿಂಗದಿಂದ ಹೊರಹೊಮ್ಮುವ ಜಲಧಾರೆ ಭೀಮ ನದಿಯಾಗಿ ರೂಪಗೊಳ್ಳುತ್ತದೆ ಎಂದು ನಂಬಲಾಗುತ್ತದೆ. ಅನೇಕ ಭಕ್ತಾದಿಗಳು ಈ ದರ್ಶನವನ್ನು ಪಡೆದಾಗ ಆ ಸಮಯದಲ್ಲಿ ಅಪಾರ ಶಾಂತಿ ಮತ್ತು ದೈವಿಕ ಅನುಭವಗಳನ್ನು ಹೊಂದುತ್ತಾರೆ ಎಂದು ಭಕ್ತರು ನಂಬುತ್ತಾರೆ.

ಭೀಮಾಶಂಕರ ಜ್ಯೋತಿರ್ಲಿಂಗವನ್ನ ಭಕ್ತರು ಕೈಯಿಂದ ನೇರವಾಗಿ ಶಿವಲಿಂಗಕ್ಕೆ ಅಭಿಷೇಕ, ಅರ್ಚನೆ ಹಾಗೂ ಸ್ಪರ್ಶ ದರ್ಶನ ಮಾಡುವ ಅವಕಾಶವಿದೆ, ಭೀಮಾಶಂಕರನ ದರ್ಶನ ಭಾಗ್ಯದಿಂದ ಭಕ್ತರಿಗೆ ಶಕ್ತಿ ಮತ್ತು, ಧೈರ್ಯ  ದೊರೆಯುತ್ತದೆ ಎನ್ನುವುದು ಇಲ್ಲಿನ ಭಕ್ತರ  ನಂಬಿಕೆ.



ಶಿವಲಿಂಗ ಮತ್ತು ಭೀಮಾಶಂಕರ  ಜ್ಯೋತಿರ್ಲಿಂಗದ: ವ್ಯತ್ಯಾಸ ಏನು?
ಶಿವಲಿಂಗ ಶಿವನ ಸಂಕೇತಾತ್ಮಕ ರೂಪವಾಗಿದ್ದು, ಎಲ್ಲೆಡೆ ಪೂಜೆಗೆ ಲಭ್ಯ. ಜ್ಯೋತಿರ್ಲಿಂಗ ಎಂದರೆ ಶಿವನು ಸ್ವತಃ ಜ್ಯೋತಿಯ ರೂಪದಲ್ಲಿ ಪ್ರಕಟಗೊಂಡ ಪವಿತ್ರ ಸ್ಥಳ.

ಶಾಸ್ತ್ರಗಳ ಪ್ರಕಾರ, ಭಕ್ತಿಯೇ ಶಕ್ತಿಯ ಮೂಲ. ಜ್ಯೋತಿರ್ಲಿಂಗಗಳಲ್ಲಿ ಶಕ್ತಿ ಹೆಚ್ಚು ಅನುಭವವಾಗುತ್ತದೆ ಎಂಬ ನಂಬಿಕೆ ಇದ್ದರೂ, ನಿಷ್ಠೆಯಿಂದ ಮಾಡಿದ ಶಿವಲಿಂಗ ಪೂಜೆಯೂ ಸಮಾನ ಫಲ ನೀಡುತ್ತದೆ.

12 ಜ್ಯೋತಿರ್ಲಿಂಗಗಳ ಪಟ್ಟಿ
  1. ಸೋಮನಾಥ – ಗುಜರಾತ್
  2. ಮಲ್ಲಿಕಾರ್ಜುನ – ಆಂಧ್ರಪ್ರದೇಶ
  3. ಮಹಾಕಾಳೇಶ್ವರ – ಮಧ್ಯಪ್ರದೇಶ
  4. ಓಂಕಾರೇಶ್ವರ – ಮಧ್ಯಪ್ರದೇಶ
  5. ಕೇದಾರನಾಥ – ಉತ್ತರಾಖಂಡ
  6. ಭೀಮಾಶಂಕರ – ಮಹಾರಾಷ್ಟ್ರ
  7. ವಿಶ್ವನಾಥ – ವಾರಾಣಸಿ
  8. ತ್ರ್ಯಂಬಕೇಶ್ವರ – ನಾಸಿಕ್
  9. ವೈಧ್ಯನಾಥ – ಜಾರ್ಖಂಡ್
  10. ನಾಗೇಶ್ವರ – ಗುಜರಾತ್
  11. ರಾಮೇಶ್ವರಂ – ತಮಿಳುನಾಡು
  12. ಘೃಷ್ಣೇಶ್ವರ – ಮಹಾರಾಷ್ಟ್ರ
ದರ್ಶನದ ವೇಳೆ.
ಭೀಮಶಂಕರ ಜ್ಯೋತಿರ್ಲಿಂಗ ದೇವಾಲಯವು ದಿನ ಪ್ರತಿ ತೆಗೆದಿದ್ದು ಪ್ರತಿದಿನ ಬೆಳಗ್ಗೆ ಸುಮಾರು 4:30ಕ್ಕೆ ಕರೆಯಲಾಗುತ್ತದೆ ಹಾಗೂ ರಾತ್ರಿ 9:30 ಕ್ಕೆ ಮುಚ್ಚಲಾಗುತ್ತದೆ 

ಪೂಜೆ ಹಾಗೂ ಆರತಿ ಕಾರ್ಯಕ್ರಮಗಳು
ಬೆಳಗ್ಗೆ 4:30ಕ್ಕೆ ಕಾಕಡ ಆರತಿ 
ಬೆಳಗ್ಗೆ 5:00 ಗಂಟೆಗೆ ನಿಜರೂಪ ದರ್ಶನ 
ಐದು ಮೂವತ್ತಕ್ಕೆ ದಿನದ ಪೂಜೆ ಹಾಗೂ ಅಭಿಷೇಕ ಮಧ್ಯಾಹ್ನ 12 ಗಂಟೆಗೆ ನೈವೇದ್ಯ ಪೂಜಾ ಕಾರ್ಯಕ್ರಮಗಳು 
12:30 ಕ್ಕೆ ಪೂಜಾ ಮತ್ತು ಅಭಿಷೇಕ ಮೂರು ಗಂಟೆಗೆ ಸಂಜೆ ಮಧ್ಯಾಹ್ನದ ಆರತಿ ಹಾಗೂ ಸಂಜೆ 
7.30 ಕ್ಕೆ ಸಂಜೆ ಆರತಿ

ಭೀಮಾಶಂಕರದ ಬಗ್ಗೆ ನಿಮಗಿದು ತಿಳಿದಿರಲಿ 

ಭೀಮಶಂಕರ ಜ್ಯೋತಿರ್ಲಿಂಗವನ್ನ ಭೇಟಿ ಮಾಡಲು ಉತ್ತಮವಾದ ಸಮಯ ಯಾವುದು?

ಭೀಮಶಂಕರ ಜ್ಯೋತಿರ್ಲಿಂಗವನ್ನು ನೀವು ಅಕ್ಟೋಬರ್ ನಿಂದಾ ಮಾರ್ಚ್ ವರೆಗೂ ಭೇಟಿ ಮಾಡಲು ಉತ್ತಮ ಸಮಯ ಹಾಗೂ ಮಹಾರಾತ್ರಿ  ಸಮಯದಲ್ಲಿ ವಿಶೇಷ ಪೂಜೆಗಳ ನಡೆಯುವುದರಿಂದ ನೀವು ದರ್ಶನ ಮಾಡಿದರೆ ಪುಣ್ಯ ಫಲ ಉಂಟಾಗುವುದು ಆದರೆ ಹೆಚ್ಚು ಜನಗಳಿರುವುದರಿಂದ ನೀವು ಮೊದಲೇ ಬುಕಿಂಗ್ ಮಾಡಿಕೊಂಡರೆ ಒಳ್ಳೆಯದು.

ಭೀಮಾಶಂಕರ ಜ್ಯೋತಿರ್ಲಿಂಗದ ಹತ್ತಿರದ ವಿಮಾನ ನಿಲ್ದಾಣ ಯಾವುದು? 
ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೀವು ಭೀಮಾಶಂಕರವನ್ನು ತಲುಪಬಹುದು, ಪುಣೆಯಿಂದ ನೀವು ಲೋಕಲ್ ಬಸ್ಗಳ ಮೂಲಕ   ಭೀಮಾಶಂಕರ  ತಲುಪಬಹುದು.

ಭೀಮಾ ಶಂಕರ ಜ್ಯೋತಿರ್ಲಿಂಗ ದರ್ಶನ ಮಾಡಕ್ಕೆ ಬೆಂಗಳೂರಿನಿಂದ ರೈಲ್ ವ್ಯವಸ್ಥೆ ಇದೆಯೇ ?

ಹೌದು. ರೈಲ್ವೆ ವ್ಯವಸ್ಥೆಗಳು ಇದಾವೆ ಆದರೆ ನೀವು ಬೆಂಗಳೂರಿನಿಂದ ರೈಲು ಮೂಲಕ ಪುಣೆ ತಲುಪಿ ಅಲ್ಲಿಂದ ನೀವು ಲೋಕಲ್ ಬಸ್ ಅಥವಾ ಟ್ಯಾಕ್ಸಿ ಮೂಲಕ ಭೀಮಶಂಕರಕ್ಕೆ ತಲುಪಬೇಕು.

ಪುಣೆಯಿಂದ ಭೀಮಶಂಕರ ಜ್ಯೋತಿರ್ಲಿಂಗ ಎಷ್ಟು ದೂರ? 
ನೀವು ಬೆಂಗಳೂರಿನಿಂದ ಪುಣೆಗೆ  ವಿಮಾನದ ಮೂಲಕ ತಲುಪಬಹುದು ಅಲ್ಲಿಂದ ಸುಮಾರು 150 ಕಿಲೋ ಮೀಟರ್ ದೂರ ಇರುವುದರಿಂದ ನೀವು ಬಸ್ ಅಥವಾ ಟ್ಯಾಕ್ಸಿ ಮೂಲಕ ಭೀಮಾಶಂಕರಕ್ಕೆ ಸಲುವಾಗಿ ಹೋಗಬಹುದು.

ಭಕ್ತಾದಿಗಳಿಗೆ ವಿಶೇಷ ವಿನಂತಿ ಸೋಮವಾರ ಶ್ರಾವಣ ಮಾಸ ಹಾಗೂ ಮಹಾಶಿವರಾತ್ರಿ ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಿರುವುದರಿಂದ ವಿಶೇಷ ಪೂಜೆಗಳು ಮತ್ತು ಹಲವಾರು ಅಭಿಷೇಕಗಳು ನಡೆಯುತ್ತಿರುತ್ತವೆ, ಮುಂಜಾಗ್ರತವಾಗಿ ದೇವಸ್ಥಾನದ ದರ್ಶನದ ಟಿಕೆಟ್ ಹಾಗೂ ರೂಮ್ ಗಳನ್ನು ಇತ್ಯಾದಿ ಮುಂಗಡ ಬುಕ್ ಮಾಡಿದರೆ ಸುಲಭವಾಗಿ ನೀವು ದರ್ಶನ ಮಾಡಿಕೊಂಡು ಬರಬಹುದು.

ಈ ಲೇಖನದ ಜೊತೆಗೆ  ಭಿಮಾಶಂಕರದ ಹತ್ತಿರದ ಸ್ಥಳಗಳನ್ನ ನೀವು ನೋಡಬಹುದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತಿ.