Header Ads Widget

Responsive Advertisement

ಮಹಾಶಿವರಾತ್ರಿ - ಕರ್ನಾಟಕದಲ್ಲಿ ಆಚರಣೆಗಳ ದಿನಾಂಕ, ಪೂಜೆ ವಿಧಾನ, ಮಹತ್ವ ಮತ್ತು ಉಪವಾಸ ನಿಯಮಗಳು

 ಶಿವರಾತ್ರಿ ಹಬ್ಬವೂ ಭಾರತದಲ್ಲಿ ಅತ್ಯಂತ ಮಹತ್ವವಾದಂತಹ ಹಬ್ಬ.  ಶಿವರಾತ್ರಿ ಹಬ್ಬದಂದು ಶಿವನ ಭಕ್ತರು ಆತ್ಮ ಶುದ್ಧಿ, ಧ್ಯಾನ ಮತ್ತು ಭಕ್ತಿಯ ಮೂಲಕ ಶಿವನ ಆರಾಧಿಸುತ್ತಾರೆ ಹಾಗೂ ಮಹಾರಾತ್ರಿ ದಿನದಂದು ಶಿವ ಮತ್ತು ಶಕ್ತಿಯ ಏಕತ್ವದ ಸಂಗೀತವಾಗಿದ್ದು ಈ ದಿನದಂದು ಶಿವನೂ ಶಿವ ತಾಂಡವ ನೃತ್ಯವನ್ನು ಆಡಿದ್ದನು ಹಾಗೂ ಶಿವ ಪಾರ್ವತಿಯರ ವಿವಾಹವಾಯಿತೆಂಬುದು ಎಲ್ಲಾ ಭಕ್ತರ ನಂಬಿಕೆ.


2026ರ ಮಹಾಶಿವರಾತ್ರಿ ಹಬ್ಬವು ಎಂದು ಆಚರಿಸಲಾಗುತ್ತದೆ

2026ರ ಮಹಾಶಿವರಾತ್ರಿ ಹಬ್ಬವು ಎಂದು ಆಚರಿಸಲಾಗುತ್ತದೆ ಹಾಗೂ ಯಾವ ಶುಭ ಸಮಯದಲ್ಲಿ ಯಾವ ಆಚರಣೆಗಳನ್ನು ಆಚರಿಸಬೇಕೆಂಬುದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ

2026ರ ಫೆಬ್ರವರಿ ತಿಂಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಬರುವ ಚತುರ್ದಶಿ ತಿಥಿ ಅಂದರೆ ಫೆಬ್ರವರಿ 15 ಭಾನುವಾರ ಶಿವರಾತ್ರಿಯನ್ನು ಆಚರಿಸಲಾಗುತ್ತದೆ ಫೆಬ್ರವರಿ 14ರ ಸಂಜೆಯಿಂದ ಆರಂಭವಾಗಿ ಫೆಬ್ರವರಿ 15ರ ಸಂಜೆಯ ಅಂತ್ಯಗೊಳ್ಳುತ್ತದೆ ಶಿವರಾತ್ರಿಯ ಹಬ್ಬದಂದು ಮಧ್ಯರಾತ್ರಿ ಶಿವ ಪೂಜೆ ಅಂತ್ಯದ ಮಹತ್ವವಾಗಿ ಉಳಿಯುತ್ತದೆ

ಮಹಾಶಿವರಾತ್ರಿಯ ದಿವ್ಯ ಕಥೆ 

ಮಹಾಶಿವರಾತ್ರಿಯ ದಿವ್ಯ ಕಥೆಯನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಪುರಾಣಗಳ ಪ್ರಕಾರ ಸಮುದ್ರ ಮಂಥನದ  ಸಮಯದಲ್ಲಿ ಸಮುದ್ರ ಮಂಥನ ಮಾಡುವಾಗ ಹಾಲಹಾಲಾ ವಿಷ ಉದ್ಭವಿಸಿತು. ಸೃಷ್ಟಿಯನ್ನು ಉಳಿಸಲು ಶಿವನು  ವಿಷವನ್ನ ಕುಡಿದಾಗ, ವಿಷವು ಕಂಠದಲ್ಲಿ ನಿಲ್ಲಿಸಿದಾಗ ಶಿವನು ನೀಲಕಂಠನಾದನು, ಇಂದಿನ ದಿನವನ್ನು ಶಿವರಾತ್ರಿ ಯಾಗಿ ಆಚರಣೆ ಮಾಡಲಾಗುತ್ತದೆ ಹಾಗೂ ಮೊದಲನೇ ಬಾರಿಗೆ ಶಿವಲಿಂಗವು ಪ್ರತ್ಯಕ್ಷವಾದ ಕಾರಣ ಇದನ್ನು ಶಿವರಾತ್ರಿ ಎಂದು ಭಕ್ತರು ಆಚರಣೆ ಮಾಡುತ್ತಾರೆ.. 

ಹಾಗಾದರೆ ಶಿವರಾತ್ರಿಯನ್ನ ಹೇಗೆ ಮಾಡಬೇಕು?

ಶಿವರಾತ್ರಿಯನ್ನು ಭಕ್ತರು ಬೆಳಗ್ಗೆ ಬೇಗನೆ ಎದ್ದು, ಅಭ್ಯಂಜನ ಸ್ನಾನವನ್ನು ಮಾಡಿ ಉಪವಾಸವನ್ನು ಕೈಗೊಂಡು ದೇವಸ್ಥಾನಗಳಿಗೆ ಭೇಟಿಕೊಟ್ಟು. ದೇವಸ್ಥಾನಗಳಲ್ಲಿ ನಡೆಯುವ ಶಿವ ಭಜನೆ, ಶಿವನ ಆರಾಧನೆ ಹಾಗೂ ಶಿವನನ್ನ ಭಕ್ತಿ ಪೂರ್ವಕವಾಗಿ ನಮಸ್ಕರಿಸಿ, ರಾತ್ರಿ ಎಲ್ಲಾ ಜಾಗರಣೆಯನ್ನು ಮಾಡುತ್ತಾರೆ ಹಾಗೂ ಶಿವನೊಲಿದರೆ ಭಯವಿಲ್ಲ ಮತ್ತು ಶಕ್ತಿಯು ಪ್ರಾಪ್ತವಾಗುತ್ತದೆ ಎಂದು ಭಕ್ತರು ನಂಬುತ್ತಾರೆ.

ಮಹಾಶಿವರಾತ್ರಿ ಪೂಜೆ ವಿಧಾನ ಹಾಗೂ ಮಹತ್ವ

ಪೂಜೆ, ಭಜನೆ ಮತ್ತು ಜಾಗರಣೆಯೆ ಶಿವರಾತ್ರಿಯ ವಿಶೇಷ, ಭಕ್ತರು ಬೆಳಿಗ್ಗೆ ಬೇಗನೆ ಎದ್ದು ಸ್ನಾನವನ್ನು ಮಾಡಿ, ಸ್ವಚ್ಛವಾಗಿ ವಸ್ತ್ರ ಧರಿಸಿ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ ಹಾಲು, ಜಲ, ಜೇನು, ಬಿಲ್ವ ಮತ್ತು ವಿಭೂತಿಗಳ ಮೂಲಕ ಶಿವನಿಗೆ ಅರ್ಪಿಸುತ್ತಾರೆ. ನಾಲ್ಕು ಯಾಮಗಳಲ್ಲಿ ಶಿವಪೂಜೆಯನ್ನು ಮಾಡಿ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸಿ ಆರಾಧಿಸುತ್ತಾರೆ 


ಶಿವರಾತ್ರಿಯಯಾಮ ಪೂಜೆಗಳು ಎಂದರೆ ಏನು ?

ಶಿವರಾತ್ರಿಯ ದಿನದಂದು ರಾತ್ರಿಯನ್ನ 4 ಭಾಗಗಳಾಗಿ ವಿಭಜನೆಯನ್ನು ಮಾಡಿ ಈ ವಿಭಜನೆಯನ್ನು ಯಾಮ ಎಂದು ಕರೆಯಲಾಗುತ್ತದೆ. ಮಹಾ ಶಿವರಾತ್ರಿಯ ದಿನ ಭಕ್ತರು 4 ಯಾಮಗಳಲ್ಲಿ  ಕ್ರಮವಾಗಿ ಶಿವನನ್ನ ಪೂಜಿಸುತ್ತಾರೆ . ಈ ರೀತಿ ಆರಾಧಿಸುವ ಪವಿತ್ರ ವಿಧಾನ ವನ್ನ ಯಾಮ ಪೂಜೆ ಎಂದು ಕರೆಯುತ್ತಾರೆ

ಯಾಮಾ ಎಂದರೇನು ?

ಸೂರ್ಯಾಸ್ತದ ನಂತರ ಸೂರ್ಯೋದಯವಾಗುವವರೆಗೂ ರಾತ್ರಿಯನ್ನ 4 ಸಮಭಾಗಗಳಾಗಿ ಹಂಚಿ, ಪ್ರತಿ ಭಾಗವನ್ನು ಸುಮಾರು ಮೂರು ಗಂಟೆಗಳ ಕಾಲಾವಧಿಯಲ್ಲಿ ಪೂಜೆಯನ್ನು ಮಾಡುವ ವಿಧಾನವನ್ನು ಯಾಮಾ ಎಂದು ಕರೆಯುತ್ತಾರೆ ಈ ಸಮಯದಲ್ಲಿ ಶಿವನನ್ನು ವಿಭಿನ್ನ ರೀತಿಯಲ್ಲಿ ಪೂಜೆ ಮಾಡುತ್ತಾರೆ. 


ಮೊದಲನೆಯಯಾಮ ಪೂಜೆ 

ಸೂರ್ಯಸ್ತದ ನಂತರ  ಶಿವಲಿಂಗಕ್ಕೆ ಹಾಲು, ಜಲ ಬಿಲ್ವಪತ್ರಗಳಿಂದ ಅಭಿಷೇಕ ಮಾಡಲಾಗುತ್ತದೆ  

ಎರಡನೆಯ ಯಾಮ ಪೂಜೆ

ಎರಡನೇಪೂಜೆ ರಾತ್ರಿಯ ಮಧ್ಯಭಾಗದಲ್ಲಿ ಮೊದಲನೇ ಹಂತದಲ್ಲಿ ನಡೆಯುವ ಈ ಪೂಜೆಯು ಮೊಸರು ತುಪ್ಪ ಜೇನು ಮುಂತಾದಗಳಿಂದ ಅಭಿಷೇಕ ಮಾಡಲಾಗುತ್ತದೆ 

ಮೂರನೆಯ ಯಾಮ ಪೂಜೆ

ಮೂರನೆಯ ಯಾಮ ಪೂಜೆಯ  ಸಮಯದಲ್ಲಿ ಶಿವನಿಗೆ ಗಂಗಾ ಜಲ ಬಿಲ್ವಪತ್ರೆ, ಧೂಪದ ದೀಪಗಳನ್ನು ಅರ್ಪಿಸಿ ಓಂ ನಮಃ ಶಿವಾಯ ಎಂದು ಜಪ ಮಾಡಲಾಗುತ್ತದೆ.  

ನಾಲ್ಕನೆಯ ಯಾಮ ಪೂಜೆ

ನಾಲ್ಕನೆಯ  ಯಾಮ  ಪೂಜೆ ಬ್ರಹ್ಮ ಮಹೂರ್ತದ ಸಮಯದಲ್ಲಿ ಹಣ್ಣುಗಳ ನೈವೇದ್ಯ ಮತ್ತು ಪುಷ್ಪಾರ್ಚನೆಗಳನ್ನು ಮಾಡಲಾಗುತ್ತದೆ  ಇದು ಮೋಕ್ಷ ಪ್ರಾಪ್ತಿಯ ಸಂಕೇತವಾಗಿದೆ.

ಮಹಾಶಿವರಾತ್ರಿ ಉಪವಾಸ ನಿಯಮಗಳು

ಮಹಾಶಿವರಾತ್ರಿಯ ದಿನದಂದು ಶಾಂತಿ ಮತ್ತು ಉತ್ತಮವಾದಂತಹ ಚಿಂತನೆಗಳಿಂದ ಶಿವನನ್ನ ಆರಾಧಿಸುತ್ತಾ ನಿರಾಹಾರಿಯಾಗಿ ಉಪವಾಸವನ್ನು ಮಾಡಬಹುದು ಅಥವಾ ಸಾಧ್ಯವಾದಷ್ಟು ಹಾಲು ಹಣ್ಣು ತೆಗೆದುಕೊಂಡು ಉಪವಾಸವನ್ನು ಮಾಡಬಹುದು. ಮುಖ್ಯವಾಗಿ ಧಾನ್ಯ, ಉಪ್ಪು ಮತ್ತು ಕಾರವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಕಾರಾತ್ಮಕ ಚಿಂತನೆಗಳು ಬರುವುದರಿಂದ ಈ ಚಿಂತನೆಗಳಿಂದ ದೂರವಿದ್ದು  ಶಾಂತಿಯುತವಾಗಿ ಶಿವನನ್ನು ಆರಾಧಿಸಬಹುದು ಎಂಬುದು ಭಕ್ತರ ನಂಬಿಕೆ.

ಕರ್ನಾಟಕದಲ್ಲಿ ಮಹಾಶಿವರಾತ್ರಿ ಆಚರಣೆ 

ಕರ್ನಾಟಕದಲ್ಲಿ ಮಹಾಶಿವರಾತ್ರಿಯನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಎಲ್ಲಾ ಶಿವ ದೇವಾಲಯಗಳಲ್ಲಿ ಪೂಜೆ, ಭಜನೆ, ಅಭಿಷೇಕ, ಜಾಗರಣೆ ನಡೆಯುತ್ತದೆ. ಕರ್ನಾಟಕದ ಪ್ರಸಿದ್ಧ ದೇವಾಲಯಗಳಾದ ಗೋಕರ್ಣ, ಧರ್ಮಸ್ಥಳ, ನಂಜನಗೂಡು, ಮುರುಡೇಶ್ವರ ಹಾಗೂ  ಶ್ರೀಶೈಲದ ಹತ್ತಿರ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ದೇವಾಲಯಗಳಲ್ಲಿ ಮಾಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಪೂಜೆ ಭಜನೆ ನಂತರ ರಾತ್ರಿ ಇಡೀ ಹರಿ ಕಥೆಗಳು, ಭಜನೆಗಳು ಜಾಗರಣೆಗಳನ್ನ ಮಾಡುತ್ತಾರೆ.

ಭೇಟಿ ನೀಡಬಹುದಾದ ಪ್ರಮುಖ ಶಿವಾಲಯಗಳು

  • ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ, ದಕ್ಷಿಣ ಕನ್ನಡ ಜಿಲ್ಲೆ. 
  • ಮುರುಡೇಶ್ವರ ಶಿವನ ಪ್ರತಿಮೆ, ಉತ್ತರ ಕನ್ನಡ ಜಿಲ್ಲೆ. 
  • ಗೋಕರ್ಣ ಮಹಾಬಲೇಶ್ವರ ದೇವಾಲಯ, ಉತ್ತರ ಕನ್ನಡ. 
  • ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಮೈಸೂರು ಜಿಲ್ಲೆ.

ಮಾಡಲೇಬೇಕಾದ ಕೆಲಸಗಳು

ಅಭಿಷೇಕ ಸೇವೆ ಬುಕ್ ಮಾಡುವುದು, ಮಧ್ಯರಾತ್ರಿ ಪೂಜೆಯಲ್ಲಿ ಭಾಗವಹಿಸುವುದು, ಮೌನ ಮತ್ತು ಧ್ಯಾನ ಪಾಲಿಸುವುದು, ಶಿವಪುರಾಣ ಅಥವಾ ಶಿವಸ್ತೋತ್ರ ಪಠಣ.

ಈ ಸಮಯದಲ್ಲಿ ಸವಿಯಬಹುದಾದ ಆಹಾರ

ಉಪವಾಸ ಆಹಾರವಾಗಿ ಸಬ್ಬಕ್ಕಿ ಪಾಯಸ, ಹಣ್ಣುಗಳ ಸಲಾಡ್, ಹಾಲು, ಬಾದಾಮಿ ಪಾನೀಯ. ದೇವಸ್ಥಾನ ಪ್ರಸಾದವೂ ವಿಶೇಷ ಅನುಭವ ನೀಡುತ್ತದೆ.

ಮಹಾಶಿವರಾತ್ರಿ ಉಪವಾಸವನ್ನು ನೀವು ಕಡ್ಡಾಯವಾಗಿ ಮಾಡಬೇಕೇ?

ಮಹಾಶಿವರಾತ್ರಿಯ ದಿನದಂದು ಉಪವಾಸವನ್ನು ಮಾಡಲೇಬೇಕು ಎಂಬುದು ಕಡ್ಡಾಯವೇನಿಲ್ಲ. ಶಿವಭಕ್ತರು ತಮ್ಮ ಅನುಕೂಲಕ್ಕೆ ತಕ್ಕನಾಗಿ ಉಪವಾಸದ ರೀತಿಯನ್ನು ಅನುಸರಿಸಬಹುದು ಹಣ್ಣು ಅಥವಾ ಹಾಲನ್ನು ತೆಗೆದುಕೊಂಡು ಉಪವಾಸ ಮಾಡಬಹುದು.

ಮಹಾಶಿವರಾತ್ರಿ ರಾತ್ರಿ ಜಾಗರಣೆ ಯಾಕೆ ಮುಖ್ಯ?
ನೀವು ಜಾಗರಣೆ ಮಾಡುವುದರಿಂದ ಮನಸ್ಸು ಜಾಗೃತವಾಗಿದ್ದು ಧ್ಯಾನಕ್ಕೆ ಸಹಾಯಕವಾಗುತ್ತದೆ.

ಮಹಾಶಿವರಾತ್ರಿ ಮಕ್ಕಳೂ ಆಚರಿಸಬಹುದೇ?
ಹೌದು, ನಾವು ಮಕ್ಕಳಿಗೆ ಭಕ್ತಿಭಾವ ಮತ್ತು ಸರಳ ಪೂಜೆ ಪರಿಚಯಿಸಬಹುದು.

ಮಹಾಶಿವರಾತ್ರಿ ಒಂದೇ ದಿನವೇ?
ಹೌದು, ಆದರೆ ಅದರ ಆಧ್ಯಾತ್ಮಿಕ ಪರಿಣಾಮ ವರ್ಷಪೂರ್ತಿ ಇರುತ್ತದೆ ಎಂದು ನಂಬಲಾಗುತ್ತದೆ.

ನಿಮ್ಮ ಅಭಿಪ್ರಾಯ ತಿಳಿಸಿ

ನೀವು ಮಹಾಶಿವರಾತ್ರಿಯನ್ನು ಹೇಗೆ ಆಚರಿಸುತ್ತೀರಿ? ಯಾವ ಶಿವಾಲಯ ನಿಮ್ಮ ಮನಸ್ಸಿಗೆ ಹೆಚ್ಚು ಹತ್ತಿರ? ಕಾಮೆಂಟ್ ಮೂಲಕ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.


Post a Comment

0 Comments