Header Ads Widget

Responsive Advertisement

Kashi, Prayagraj, and Ayodhya Pilgrimage trip Three Days Travel Plan

ಕಾಶಿ, ಪ್ರಯಾಗರಾಜ್‌ ಹಾಗೂ ಅಯೋಧ್ಯೆ ಮೂರು ದಿನ ಹಾಗೂ ಎರಡು ರಾತ್ರಿಗಳ ಈ ಯಾತ್ರೆ


ಕಾಶಿ, ಪ್ರಯಾಗರಾಜ್‌ ಹಾಗೂ ಅಯೋಧ್ಯೆ ಮೂರು ದಿನ ಹಾಗೂ ಎರಡು ರಾತ್ರಿಗಳ ಈ ಯಾತ್ರೆ ಏನಾದ್ರೂ ಪ್ಲಾನ್ ಮಾಡ್ತಾ ಇದ್ದರೆ. ಈ ರೀತಿ ಪ್ಲಾನ್ ಮಾಡಬಹುದು. 

ಕಾಶಿ ಡೇ 1 ಪ್ಲಾನ್ :

ಬೆಳಗ್ಗೆ

ಮೊದಲ ದಿನ ಬೆಳಿಗ್ಗೆ ಬೆಂಗಳೂರಿನಿಂದ ಫ್ಲೈಟ್ ನಲ್ಲಿ  ಹೊರಟು ಕಾಶಿಗೆ ತಲುಪಿ, ದೇವಸ್ಥಾನದ ಪಕ್ಕದಲ್ಲೇ ರೂಮುಗಳನ್ನ ಮಾಡಬಹುದು. ಮೊದಲೇ ರೂಮ್ ಬುಕ್ ಮಾಡಿಕೊಂಡರೆ ಒಳ್ಳೆಯದು. ಕಾಶಿಯಲ್ಲಿ ಇಳಿದ ತಕ್ಷಣ,  ಸಾಮಾನ್ಯವಾಗಿ ನಾವೆಲ್ಲ ನೇರವಾಗಿ   ಕಾಶಿ ವಿಶ್ವನಾಥನ   ದರ್ಶನ ಮಾಡ್ತೀವಿ ಆದರೆ ಅದಕ್ಕೂ ಮುಂಚೆ ನೀವು ಮಾಡಬೇಕಾಗಿರೋದು. 

- ಗಂಗಾ ಘಾಟ್‌ನಲ್ಲಿ ಸ್ನಾನ ಮಾಡಿ ದಿನವನ್ನು ಶುರುಮಾಡಿ.  
- ಸ್ನಾನ ಮಾಡಿದ ಮೇಲೆ  ಭಗವಾನ್ ಕಾಲ ಭೈರವನ ದೇವಸ್ಥಾನಕ್ಕೆ ಹೋಗಿ ಕಾಲ ಭೈರವನ ದರ್ಶನ ಮಾಡಿ ಆಶೀರ್ವಾದ ಮತ್ತು ಅನುಮತಿಗಳನ್ನು ತೆಗೆದುಕೊಳ್ಳಬೇಕು
ನೀವು ಕಾಶಿ ವಿಶ್ವನಾಥ ದೇವಾಲಯದ ಕಡೆಗೆ ಹೋಗುವಾಗ, ನೀವು ಕಾಶಿಯ ರಾಜಕುಮಾರ ಮತ್ತು ವಿಶ್ವನಾಥನ ಮಗನಾದ ಕಾಶಿ  ಡುಂಡಿರಾಜ  ಗಣೇಶನ  ಆಶೀರ್ವಾದ ಮತ್ತು ಅನುಮತಿಯನ್ನು ತೆಗೆದುಕೊಳ್ಳಬೇಕು.
ನಂತರ ಅಂತಿಮವಾಗಿ ಭಗವಾನ್ ಕಾಶಿ ವಿಶ್ವನಾಥನ್ದ ದರ್ಶನ . 
- ಆದರೆ ನೀವು ಹೊರಗೆ ಬರುತ್ತಿದ್ದಂತೆ,  ಮಾತ ಅನ್ನಪೂರ್ಣ ದೇವಿಯ ದರ್ಶನ  ಮಾಡಬೇಕು.  ಮಾತ ಅನ್ನಪೂರ್ಣ ದೇವಿಯ ದರ್ಶನ  ಮಾಡಿದ ಮೇಲೆ ಕಾಶಿ ವಿಶ್ವನಾಥನ್ ದರ್ಶನ ಸಫಲವಾಗುವುದು ಎನ್ನುವುದು  ಕಾಶಿ ಜನರ ನಂಬಿಕೆ. 
- ವಿಶಾಲಾಕ್ಷಿ ದೇವಿ ದೇವಸ್ಥಾನ – ಶಕ್ತಿಪೀಠದ ದರ್ಶನ ಮಾಡಿ. 

ಮಧ್ಯಾಹ್ನ
- ಸ್ಥಳೀಯ ಊಟ – ಕಚೋರಿ, ಜಲೇಬಿ, ಥಂಡಾಯಿ ಮುಂತಾದ ಕಾಶಿಯ ಪ್ರಸಿದ್ಧ ತಿನಿಸುಗಳನ್ನು ರೋಡ್ ಸೈಡ್ ಫುಡ್ ಟ್ರೈ ಮಾಡಿ. 

ಸಂಜೆ
ಸಂಜೆ  ಘಾಟ್ಗಳಲ್ಲಿ ಓಡಾಡಿ - ದೋಣಿ ಸವಾರಿ – ಸೂರ್ಯಾಸ್ತ ಸಮಯದಲ್ಲಿ ಗಂಗೆಯ ಮೇಲೆ ದೋಣಿ ಸವಾರಿ.  ಗಂಗಾ ಆರತಿ ನೋಡಿ, ರಾತ್ರಿ ಕಾಶಿಯಲ್ಲಿ ಸ್ಟೇಮಾಡಿ. 

ದೋಣಿ ಸವಾರಿಗೆ ಒಬ್ಬರಿಗೆ 100 ರಿಂದ 15೦ ರೂಪಾಯಿಗಳನ್ನ ತಗೊಬಹೋದು.

ಪ್ರಯಾಗರಾಜ್‌  ಡೇ 2  ಪ್ಲಾನ್:  ಏನು ನೋಡಬೇಕು, ಏನು ಮಾಡಬೇಕು

ಬೆಳಿಗ್ಗೆ 

ಎರಡನೇ ದಿನ. ಕಾಶಿ ಇಂದ ಪ್ರಯಾಗರಾಜ್‌ಗೆ ಎರಡು ಗಂಟೆಗಳ ಪ್ರಯಾಣ ಟ್ಯಾಕ್ಸಿ ಬುಕ್ ಮಾಡ್ಕೊಳ್ಳಿ  ಇಲ್ಲ 
ಅಂದರೆ ಲೋಕಲ್ಟ್ರೈ ನಲ್ಲಿ  ಕೂಡ ಪ್ರಯಾಗರಾಜ್‌ಗೆ   ತೆರಳಿ. ತೆರಳಿದ ಮೇಲೆ.

-ಬೋಟ್ ಗಳ ಮೂಲಕ ಸಂಗಮದಲ್ಲಿ ಸ್ನಾನ ಮಾಡಿ, ಪ್ರಯಾಗರಾಜ್‌ನಲ್ಲಿ ಸಂಗಮ ಸ್ನಾನ ಮಾಡುವ ಮೊದಲು ಪಂಡಿತರ ಮೂಲಕ ಪೂಜೆ ಮಾಡಿಸಬಹುದು. 
-ಸಂಗಮದಲ್ಲಿ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮವಾಗುತ್ತದೆ ಎಂದು ನಂಬಿಕೆ ಇದೆ. ಬೋಟ್ ರೈಡ್ ಮಾಡುವಾಗ ಜೀವ ರಕ್ಷಕ ಜಾಕೆಟ್ ಧರಿಸುವುದು ಉತ್ತಮ.

- ದೋಣಿ ಸವಾರಿಗೆ ಒಬ್ಬರಿಗೆ 300 ರಿಂದ 50೦ ರೂಪಾಯಿಗಳನ್ನ ತಗೊಬಹೋದು.

- ಅಲ್ಲೇ ಇರುವ ಹನುಮಾನ್ ಮಂದಿರಕ್ಕೆ ಬೇಟಿ ನೀಡಿ.
ಅಕ್ಷಯವಟ ದೇವಸ್ಥಾನ – 3000 ವರ್ಷ ಹಳೆಯದಾದ ಅಮರವಾದ ಬನಿಯನ್ ಮರ ನೋಡುಬನ್ನಿ.

-ಸಮಯ ಇದ್ದರೆ ಆನಂದ ಭವನ ಹಾಗೂ ಅಕ್ಬರ್ ಕೋಟೆ ಹೊರಭಾಗವನ್ನು ವೀಕ್ಷಿಸಬಹುದು. 

ಮಧ್ಯಾಹ್ನ

ಮಧ್ಯಾಹ್ನ ಊಟವನ್ನು ಸ್ಥಳೀಯ ಹೋಟೆಲ್‌ಗಳಲ್ಲಿ ಮಾಡಿ ನಂತರ ಅಯೋಧ್ಯೆ ಕಡೆ ಪ್ರಯಾಣ.

ಅಯೋಧ್ಯೆ ಕಡೆ ಟ್ಯಾಕ್ಸಿಯಲ್ಲಿ 3  ರಿಂದ 4  ಗಂಟೆಗಳ ಪ್ರಯಾಣ ಮಾಡಿ,  ಎರಡನೇ ದಿನ ಅಯೋಧ್ಯಯಲ್ಲಿ ಸ್ಟೇಮಾಡಿ.  

ಅಯೋಧ್ಯಾ ಶ್ರೀರಾಮನ ದರ್ಶನ  ಡೇ 3 ಪ್ಲಾನ್ :

ಬೆಳಿಗ್ಗೆ

ಮೂರನೇ ದಿನ ಅಯೋಧ್ಯಾ ಯಲ್ಲಿ  ಇಳಿದ ತಕ್ಷಣ,  ಸಾಮಾನ್ಯವಾಗಿ ನಾವೆಲ್ಲ ನೇರವಾಗಿ  ಶ್ರೀರಾಮನ  ದರ್ಶನ ಮಾಡ್ತೀವಿ ಆದರೆ ಅದಕ್ಕೂ ಮುಂಚೆ ನೀವು ಮಾಡಬೇಕಾಗಿರೋದು. 

- ಅಯೋಧ್ಯೆಯಲ್ಲಿ ಯಮುನಾ ಘಾಟ್ ನಲ್ಲಿ ಸ್ನಾನ ಮಾಡಿ 
- ಆಮೇಲೆ ಹನುಮಾನ್ ಗಡಿ ಮಂದಿರಕ್ಕೆ   ಮೊದಲು ಭೇಟಿ ನೀಡಬೇಕು. ಹನುಮಾನ್ ಗಡಿ ದೇವಾಲಯದ್ಲಲ್ಲಿ ರಾಮನ ಅರಮನೆಯ ರಕ್ಷಣೆಗಾಗಿ  ಹನುಮಾನ್ ಇಲ್ಲಿ ವಾಸಿಸುತ್ತಿದ್ದರೆಂದು ಪುರಾಣಗಳು ಹೇಳುತ್ತವೆ. ಆದ್ದರಿಂದ ಹನುಮಾನ್ ದರ್ಶನದ. 
- ನಂತರಾ ಹನುಮಾನ್ ಘಡಿ ಯ ಪಕ್ಕದಲ್ಲೇ ಇರುವ ಶ್ರೀ ರಾಮನ ಜನ್ಮ ಭೂಮಿ ಭವ್ಯ ವಾದ ರಾಮ ಮಂದಿರ ದಲ್ಲಿ ಶ್ರೀರಾಮನ ದರ್ಶನ ಮಾಡಿ ನಂತರ
-  ಶ್ರೀರಾಮ್ ಸೀತಾ ಸಮೇತ ವಾಸ ವಾಗಿದ್ದ ಸ್ಥಳ ಕನಕ ಭವನಕ್ಕೆ ಬೇಟಿ ನೀಡಿ. ಕನಕ ಭವನ ವನ್ನ ನೋಡಿದ  ಮೇಲೆ ದಶರಥ ಮಹಾರಾಜರು ವಾಸಿಸುತ್ತಿದ್ದ ಜಾಗ ದಶರಥ ಮಹಾಲ್ ನ್ನು ನೋಡಿಕೊಂಡು 

ಮಧ್ಯಾಹ್ನ

ಅಮವ ರಾಮ್ ಟೆಂಪಲ್ ನಲ್ಲಿ ಪ್ರಸಾದವನ್ನು ತೆಗೆದುಕೊಂಡು ನಂತರ  ರಾಮ್ ಕಿ ಪೈದಿ ಘಾಟ್ ಗೆ ಬನ್ನಿ. ಸರಯೂ ನದಿ ಹರಿಯುವ ದೃಶ್ಯಗಳನ್ನ ನೋಡಿ ಆಮೇಲೆ

ಶ್ರೀರಾಮನು ಐಕ್ಯವಾದ  ಗುಪ್ತರ್ ಘಟ್ಗೆ ಬಂದು
ನಂತರ ಸರಯೂ ನದಿಯ ದೈವಿಕ ಮತ್ತು ಭವ್ಯವಾದ ಸರಯೂ ಆರತಿಯನ್ನು ವೀಕ್ಷಿಸಿ. 

 ನಂತರ ಡೈರೆಕ್ಟ್ ಅಯೋಧ್ಯೆ ಇಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ತಲುಪೀ 

ಹೆಚ್ಚಿನ ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ

ಸಂಕ್ಷಿಪ್ತ ವಾಗಿ


ಕಾಶಿ, ಪ್ರಯಾಗರಾಜ್‌ ಹಾಗೂ ಅಯೋಧ್ಯೆ ಮೂರು ದಿನಗಳ ಟೂರ್ ಹೀಗೆ ಮಾಡಿ 

ಮೊದಲ ದಿನ ಬೆಳಿಗ್ಗೆ ಬೆಂಗಳೂರಿನಿಂದ ಫ್ಲೈಟ್ ನಲ್ಲಿ    ಕಾಶಿಗೆ ತಲುಪಿ,  ಹೋಟೆಲ್ ನಾ ಮೊದಲೇ ಬುಕಿಂಗ್ ಮಾಡಿ   ರಿಫ್ರೆಶ ಆಗಿ.  ಗಂಗಾ ಸ್ನಾನ , ಕಾಲಭೈರವನ ದರ್ಶನ, ಕಾಶಿ ವಿಶ್ವೇಶ್ವರನ ದರ್ಶನ, ಲೋಕಲ್ ಫುಡ್ ಎಕ್ಸ್ಪ್ಲೋರ್ ಮಾಡಿ,  ಸಂಜೆ ಗಂಗಾ ಆರತಿ , ರಾತ್ರಿ ಕಾಶಿಯಲ್ಲಿ  ಸ್ಟೇ ಮಾಡಿ. 

ಎರಡನೇ ದಿನ ಟ್ಯಾಕ್ಸಿ ಯಲ್ಲಿ ಪ್ರಯಾಗ ರಾಜ್ ಗೆ  ಬನ್ನಿ  ಸಂಗಮದಲ್ಲಿ ಸ್ನಾನ ,  ಹನುಮಾನ್  ಮಂದಿರ ವನ್ನಾ ನೋಡಿ ಪ್ರಯಾಗ ರಾಜ್ ನಿಂದಾ ಅಯೋಧ್ಯೆ ಗೆ ಬಂದು ಸ್ಟೇ ಮಾಡಿ. 

ಮೂರನೇ ದಿನ ಅಯೋಧ್ಯೆಯಲ್ಲಿ sarayu ಘಾಟ್ ,  ಹನುಮಾನ್ ಘಡಿಗೆ, ಶ್ರೀ ರಾಮ ಮಂದಿರ ವನ್ನಾ ನೋಡಿ ಕೊಂಡು  ಅಯೋಧ್ಯೆಯದ ವಿಮಾನದಲ್ಲಿ ಬೆಂಗಳೂರಿಗೆ ಬಂದು ತಲುಪಿ.

ಈ  ವಿಡಿಯೋ ನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ  ಹಾಗೂ ಈ ಚಾನಲ್ ನಾ ಫಾಲೋ ಮಾಡೋದನ್ನ ಮರೀಬೇಡಿ.

Post a Comment

0 Comments