Header Ads Widget

Responsive Advertisement

Hidden Tirupati in Pune - Prati Balaji Temple , Narayan pura, Pune - ಪ್ರತಿ ಬಾಲಾಜಿ ದೇವಾಲಯ

ಪ್ರತಿ ಬಾಲಾಜಿ ದೇವಾಲಯದ ಮಹತ್ವವೇನು?

ಪುಣೆಯ ನಾರಾಯಣಪುರ ಗ್ರಾಮದಲ್ಲಿರುವ ಈ ದೇವಾಲಯವು ತಿರುಪತಿ ಬಾಲಾಜಿ ಮಂದಿರದ ಪ್ರತಿರೂಪವಾಗಿದ್ದು, ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ  ಪ್ರಸಿದ್ಧಿ.  ಬಾಲಾಜಿ ದೇವಾಲಯವು ವಿಶಾಲವಾದ ಜಾಗದಲ್ಲಿ,  ಹಸಿರು ಬೆಟ್ಟಗಳ ನಡುವೆ, ನೈಸರ್ಗಿಕ ಸೌಂದರ್ಯದ ಮಧ್ಯೆ ಇರುವುದರಿಂದ ಇಲ್ಲಿಗೆ ಬರುವ ಭಕ್ತಾದಿಗಳು ದೈವಿಕ ಅನುಭವ ವಾಗುತ್ತದೆ. ಸುತ್ತಲಿನ ವಾತಾವರಣ ಶಾಂತಿ, ಸಮಾಧಾನ ಮೂಡುತ್ತದೆ. ನಮಗಂತೂ ದೇವಾಲಯದ ವ್ಯವಸ್ಥೆ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆ , ಸುತ್ತಮುತ್ತಲಿನ ವಾತಾವರಣ ಮನಸ್ಸನ್ನು ಖುಷಿ ಕೊಟ್ಟಿತ್ತು.

ಭಕ್ತಾದಿಗಳು ತಿರುಪತಿಯವರೆಗೂ ಪ್ರಯಾಣ ಮಾಡಲಾಗದವರಿಗೆ ಪುಣೆಯಲ್ಲಿಯೇ ತಿರುಪತಿಯ ಬಾಲಾಜಿ ದರ್ಶನದ ಅನುಭವ ವಾಗುವ ಸ್ಥಳ. ತಿರುಪತಿಯ ದೇವಾಲಯದ ಪರಿಣಿತರ ಮಾರ್ಗದರ್ಶನದ ಮೇಲೆ ಡ್ರಾವಿಡಿಯನ್ ಶೈಲಿಯ ಗೋಪುರಗಳು ಮತ್ತು ಕಲ್ಲಿನ ಶಿಲ್ಪಕಲೆಯೊಂದಿಗೆ ತಿರುಪತಿಯಂತೆಯೇ ರೂಪಿಸಲಾಗಿದೆ. ವಿಶೇಷವೇನಪ್ಪ ಅಂದರೆ ಶ್ರೀ ವೆಂಕಟೇಶ್ವರ ವಿಷ್ಣುವಿನ ಅವತಾರ ಭಕ್ತರ ಮನೋಭಿಲಾಷೆಗಳನ್ನು ಪೂರೈಸುತ್ತಾನೆಂದು ಭಕ್ತರ ನಂಬಿಕೆ. 

ಪುಣೆಯಿಂದ ಸುಮಾರ್ 45 ಕಿಲೋಮೀಟರ್ ದೂರ ಇರುವ ಈ ದೇವಾಲಯಕ್ಕೆ ಬಂದಮೇಲೆ ಬಾಲಾಜಿ ದರ್ಶನ, ಪ್ರಸಾದ ಸ್ವೀಕಾರ, ಹಾಗೂ ದೇವಸ್ಥಾನದ ಆವರಣದಲ್ಲಿರುವ ದೇವಾಲಯಗಳಲ್ಲಿ ಪೂಜೆಗಳನ್ನ ಮಾಡಿಸಬಹುದು. ಪ್ರತಿದಿನವು ಇಲ್ಲಿ ವೆಂಕಟೇಶ್ವರನಿಗೆ ವಿಶೇಷ  ಪೂಜೆ ಗಳು, ವಿಶೇಷ ಉತ್ಸವಗಳು, ಮತ್ತು ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಲಲಿ  ಭಕ್ತಾದಿಗಳು ಪಾಲ್ಗೊಳ್ಳಬಹುದು.

ಈ ದೇವಾಲಯಕ್ಕೆ ಬೆಂಗಳೂರಿನಿಂದ ತಲುಪುವ ಬಗೆ ಹೇಗೆ.

ಪುಣೆಯಿಂದ ಸುಮಾರ್ 45 ಕಿಲೋಮೀಟರ್ ದೂರ ಇರುವ ಈ ದೇವಾಲಯಕ್ಕೆ  ತಲುಪೊ ಬಗೆ ಹೇಗೆ ಅಂದ್ರೆ  ಬೆಂಗಳೂರಿನಿಂದ ಪುಣೆಗೆ ರೈಲು, ವಿಮಾನ ಅಥವಾ ಕಾರಿನಲ್ಲಿ ಸುಲಭವಾಗಿ ತಲುಪಬಹುದು.  ಪುಣೆ–ಬೆಂಗಳೂರು ಹೆದ್ದಾರಿ (NH4) ಹತ್ತಿರ, ಕೆಟ್ಕವಲೆ ಗ್ರಾಮದಲ್ಲಿ ಇದೆ. 

ರೈಲು ಮೂಲಕ:
ರೈಲು ಮೂಲಕ ಹೋಗುವುದಾದರೆ, ಬೆಂಗಳೂರಿನಿಂದ ಪುಣೆಗೆ ನೇರ ರೈಲುಗಳು ಲಭ್ಯವಿದ್ದು, ಪ್ರಯಾಣಕ್ಕೆ ಸುಮಾರು 12–14 ಗಂಟೆಗಳು ಬೇಕಾಗುತ್ತದೆ. ಪುಣೆಯಿಂದ ದೇವಾಲಯವು ಸುಮಾರು 45 ಕಿಮೀ ದೂರದಲ್ಲಿದ್ದು, ಟ್ಯಾಕ್ಸಿ ಅಥವಾ ಬಸ್ ಮೂಲಕ 1.5 ಗಂಟೆಯಲ್ಲಿ ತಲುಪಬಹುದು. 
ಬಸ್ ಮೂಲಕ:
ಬಸ್ ಮೂಲಕ ಪ್ರಯಾಣಿಸಲು KSRTC ಹಾಗೂ ಖಾಸಗಿ ವೋಲ್ವೋ/ಸ್ಲೀಪರ್ ಬಸ್‌ಗಳು ಲಭ್ಯವಿದ್ದು, ಅವುಗಳು 12–14 ಗಂಟೆಗಳಲ್ಲಿ ಪುಣೆಗೆ ತಲುಪಿಸುತ್ತವೆ. 

ವಿಮಾನ ಪ್ರಯಾಣ:
ವಿಮಾನ ಪ್ರಯಾಣ ಅತ್ಯಂತ ವೇಗವಾದ ಮಾರ್ಗವಾಗಿದ್ದು, ಬೆಂಗಳೂರಿನಿಂದ ಪುಣೆಗೆ 1.5 ಗಂಟೆಗಳಲ್ಲಿ ತಲುಪಬಹುದು; ಪುಣೆ ವಿಮಾನ ನಿಲ್ದಾಣದಿಂದ ದೇವಾಲಯಕ್ಕೆ ಟ್ಯಾಕ್ಸಿ ಮೂಲಕ 1.5–2 ಗಂಟೆ ಬೇಕಾಗುತ್ತದೆ. 

ಕಾರಿನ ಮೂಲಕ 
ಕಾರಿನಲ್ಲಿ ಸ್ವಯಂ ಪ್ರಯಾಣ ಮಾಡುವವರು NH4 ಹೆದ್ದಾರಿಯ ಮೂಲಕ ತುಮಕೂರು – ಚಿತ್ರದುರ್ಗ – ಹುಬ್ಬಳ್ಳಿ – ಕೊಲ್ಹಾಪುರ ಮಾರ್ಗವಾಗಿ ಸುಮಾರು 850 ಕಿಮೀ ಪ್ರಯಾಣಿಸಬೇಕಾಗುತ್ತದೆ, ಇದಕ್ಕೆ 12–13 ಗಂಟೆಗಳು ಬೇಕಾಗುತ್ತದೆ.  ಒಟ್ಟಿನಲ್ಲಿ, ವೇಗ ಮತ್ತು ಅನುಕೂಲಕ್ಕಾಗಿ ವಿಮಾನ ಅಥವಾ ರೈಲು ಮೂಲಕ ಪುಣೆಗೆ ಹೋಗಿ, ಅಲ್ಲಿ ಟ್ಯಾಕ್ಸಿ/ಬಸ್ ಮೂಲಕ ದೇವಾಲಯ ತಲುಪುವುದು ಉತ್ತಮ ಆಯ್ಕೆ.

ಸ್ಟೇ ಇಲ್ಲಿ ಮಾಡಬಹುದು?

ಪುಣೆಯಲ್ಲಿಯೇ ಹೋಟೆಲ್‌ಗಳು, ಲಾಡ್ಜ್‌ಗಳು ಇರೋದ್ರಿಂದ ನೀವು ಪುಣೇಲಿ ಸ್ಟೇ ಮಾಡಬಹುದು.  ಪ್ರತಿಬಾಲಾಜಿ ದೇವಾಲಯಕ್ಕೆ ಹತ್ತಿರದಲ್ಲೇ ವಾಸ್ತವ್ಯ ವ್ಯವಸ್ಥೆಗಳು ಲಭ್ಯವಿವೆ. ದೇವಾಲಯವು ಪುಣೆಯಿಂದ ಸುಮಾರು 45 ಕಿಮೀ ದೂರದಲ್ಲಿರುವುದರಿಂದ, ನೀವು ಪುಣೆಯಲ್ಲೇ ಹೋಟೆಲ್‌ಗಳಲ್ಲಿ ತಂಗಿ ನಂತರ ದೇವಾಲಯಕ್ಕೆ ಹೋಗಬಹುದು ಅಥವಾ ಕೆಟ್ಕವಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ರಿಸಾರ್ಟ್‌ಗಳು ಮತ್ತು ಲಾಡ್ಜ್‌ಗಳನ್ನು ಬಳಸಬಹುದು.  



ಪ್ರತಿ ಬಾಲಾಜಿ ದೇವಾಲಯದ ವಿವರಗಳು 

ಪ್ರತಿ ಬಾಲಾಜಿ ದೇವಾಲಯವು ಪುಣೆಯ ಕೆಟ್ಕವಲೆ ಗ್ರಾಮದಲ್ಲಿ, ಪುಣೆ–ಬೆಂಗಳೂರು ಹೆದ್ದಾರಿ (NH4) ಹತ್ತಿರ, 
ವಿಳಾಸ: Balaji Road, Ketkawale, Pune, Maharashtra – 412205 

ದರ್ಶನ ಸಮಯವು ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಿಗದಿಯಾಗಿದೆ. 
ಸಾಮಾನ್ಯ ದರ್ಶನಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ, ಉಚಿತವಾಗಿ ದರ್ಶನ ಪಡೆಯಬಹುದು. ಆದರೆ ವಿಶೇಷ ದರ್ಶನಕ್ಕೆ ಟಿಕೆಟ್ ವ್ಯವಸ್ಥೆ ಇದೆ, ಅದನ್ನು ದೇವಸ್ಥಾನದಲ್ಲಿ ಪಡೆಯಬಹುದು. 

ಪ್ರಸಾದದ ವ್ಯವಸ್ಥೆಯೂ ಇದೆ –
ದರ್ಶನದ ಬಳಿಕ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುತ್ತದೆ. ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ,   ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ಹಾಗೂ ಭಕ್ತರಿಗಾಗಿ ವಸತಿ ವ್ಯವಸ್ಥೆಯೂ ಲಭ್ಯವಿದೆ.  


ನಿಮಗಿದು ತಿಳಿದಿರಲಿ

ಪ್ರತಿ ಬಾಲಾಜಿ ದೇವಾಲಯ ಎಲ್ಲಿ ಇದೆ? 
ಪುಣೆ ಯಿಂದ ಸುಮಾರು 45 ಕಿಮೀ ದೂರದಲ್ಲಿರುವ  ನಾರಾಯಣಪುರದಲ್ಲಿ ಇದೆ.  

ಪ್ರತಿ ಬಾಲಾಜಿ ದೇವಾಲಯ   ಯಾರು ನಿರ್ಮಿಸಿದ್ದಾರೆ? 
ಶ್ರೀಮಂತ ಉದ್ಯಮಿ ಶ್ರೀಮಂತ್ ಶರ್ಮಾ ಅವರಿಂದ ನಿರ್ಮಾಣ ಮಾಡಿದ್ದಾರೆ.  

ಪ್ರತಿ ಬಾಲಾಜಿ ದೇವಾಲಯ ಯಾವ ದೇವರಿಗೆ ಸಮರ್ಪಿತ? 
ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ (ಬಾಲಾಜಿ) ಗೆ ಅರ್ಪಿತವಾಗಿದೆ.

ತಿರುಪತಿ ದೇವಸ್ಥಾನದ ಪ್ರತಿರೂಪವೇ? 
ಹೌದು,   ತಿರುಮಲ ತಿರುಪತಿ  ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದೆ. 

ಪ್ರತಿ ಬಾಲಾಜಿ ದೇವಾಲಯ ದರ್ಶನ ಸಮಯ? 
ನಮಗೆ ತಿಳಿದಿರುವ ಮಾಹಿತಿಯ ಪ್ರಕಾರ ಬೆಳಿಗ್ಗೆ 5 ರಿಂದ ರಾತ್ರಿ 9ರವರೆಗೆ.  

ದೇವಾಲಯದ ದರ್ಶನ  ಶುಲ್ಕ? 
ಸಾಮಾನ್ಯ ದರ್ಶನ ಉಚಿತ, ವಿಶೇಷ ದರ್ಶನಕ್ಕೆ ನೀವು ಟಿಕೆಟ್ ತೆಗೆದುಕೊಂಡು ಹೋಗಬೇಕು. 

ದೇವಾಲಯದಲ್ಲಿ ಪ್ರಸಾದದ ವ್ಯವಸ್ಥೆ ಇದೆಯೇ?
ಹೌದು ಇದೇ.   ದೇವಾಲಯ ದಲ್ಲಿ  ಲಡ್ಡು ಪ್ರಸಾದ ವಿತರಿಸುತ್ತಾರೆ, ನಾವು ಹೋದಾಗ ದರ್ಶನ ದ ಬಳಿಕ ಕೊಟ್ಟಿದ್ದರು. 
.
ಯಾತ್ರಾರ್ಥಿಗಳಿಗೆ ಸೌಲಭ್ಯಗಳು? 
ಪಾರ್ಕಿಂಗ್, ವಸತಿ, ಅನ್ನಸಂತರ್ಪಣೆ ವ್ಯವಸ್ಥೆ.


ಒಟ್ಟಿನಲ್ಲಿ, ಪುಣೆಯಿಂದ ಸುಮಾರು 45 ಕಿಮೀ ದೂರದಲ್ಲಿರುವ ಈ ದೇವಾಲಯವು ತಿರುಪತಿಯ ದೈವಿಕ ಅನುಭವವನ್ನು ಹತ್ತಿರದಲ್ಲೇ ನೀಡುವ ಪವಿತ್ರ ಕ್ಷೇತ್ರವಾಗಿದೆ. ಭಕ್ತರು ಶಾಂತಿ, ಸಮಾಧಾನ ಮತ್ತು ದೈವಿಕ ಅನುಭವಕ್ಕಾಗಿ ಇಲ್ಲಿ ಬಂದು ದರ್ಶನ ಪಡೆಯುತ್ತಾರೆ.      ಪವಿತ್ರ ಕ್ಷೇತ್ರವನ್ನಾ  ಸ್ನೇಹಿತರಿಗೆಲ್ಲ ಶೇರ್ ಮಾಡಿ  ಹಾಗೂ ಫಾಲೋ ಮಾಡೋದನ್ನ ಮರೀಬೇಡಿ.

ಪುಣೆ ಪ್ರತಿ ಬಾಲಾಜಿ ಸುತ್ತಮುತ್ತಲಿನ ಈ ವಿಶೇಷ ಯಾತ್ರೆ ಸ್ಥಳಗಳ ಬೇಟಿ ಮಾಡೋ ಪ್ಲಾನ್ ಇದ್ರೇ ಹೆಚ್ಚಿನ ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ.


ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯ, ಭೀಮಾಶಂಕರ ಜ್ಯೋತಿರ್ಲಿಂಗ, ತ್ರಿಂಬಕೇಶ್ವರ ಜ್ಯೋತಿರ್ಲಿಂಗ, ಘೃಷ್ಣೇಶ್ವರ ಜ್ಯೋತಿರ್ಲಿಂಗ ಮತ್ತು ಶಿರಡಿ ಸಾಯಿ ಬಾಬಾ ಮಂದಿರ — ಈ ಎಲ್ಲಾ ಪವಿತ್ರ ಕ್ಷೇತ್ರಗಳು ಭಕ್ತರಿಗೆ ಆಧ್ಯಾತ್ಮಿಕ ಶಾಂತಿ ಮತ್ತು ದೈವಿಕ ಅನುಭವ ನೀಡುವ ಸ್ಥಳಗಳು. ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತಗಳ ನಡುವೆ ಇರುವ ಈ ದೇವಾಲಯಗಳು ಪ್ರಕೃತಿ ಸೌಂದರ್ಯ ಮತ್ತು ಭಕ್ತಿಭಾವವನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಅವಕಾಶ ಕೊಡುತ್ತವೆ. ದರ್ಶನ, ಪೂಜೆ, ಪ್ರಸಾದ ಮತ್ತು ಶಾಂತ ವಾತಾವರಣಕ್ಕಾಗಿ ಕುಟುಂಬದೊಂದಿಗೆ ಭೇಟಿ ನೀಡಲು ಅತ್ಯುತ್ತಮ ಯಾತ್ರಾ ಸ್ಥಳಗಳು.



ಹೆಚ್ಚಿನ ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ




Post a Comment

0 Comments