Header Ads Widget

Responsive Advertisement

ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನದ ನೆನಪಿಗೆ – ಪರಂಪರೆ ಮತ್ತು ಶುಭದ ಸಂಕೇತ!

 ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನದ ನೆನಪಿಗೆ – ಪರಂಪರೆ ಮತ್ತು ಶುಭದ ಸಂಕೇತ! 

ಕೊಲ್ಹಾಪುರದ ಮಹಾಲಕ್ಷ್ಮಿ ದೇವಾಲಯವು ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿ ಅಂಬಾಬಾಯಿ ರೂಪದ ಮಹಾಲಕ್ಷ್ಮಿಯು ಕೋಲಾಸುರ ಅಸುರನನ್ನು ಸಂಹರಿಸಿದ ಬಳಿಕ ಈ ಸ್ಥಳವು ಕೊಲ್ಹಾಪುರವಾಯಿತು, ಹಾಗೂ ಸತಿಯ ತ್ರಿನೇತ್ರ ಇಲ್ಲಿ ಬಿದ್ದ ಕಾರಣದಿಂದ ಇದು ಶಕ್ತಿಪೀಠವಾಯಿತು. 

ಮಹಾಲಕ್ಷ್ಮಿ, ಮಹಾಕಾಳಿ ಮತ್ತು ಮಹಾಸರಸ್ವತಿ ಒಟ್ಟಿಗೆ ಪೂಜಿಸಲ್ಪಡುವ ಈ ಕ್ಷೇತ್ರದಲ್ಲಿ ದರ್ಶನ ಪಡೆದರೆ ಐಶ್ವರ್ಯ, ಶಕ್ತಿ ಮತ್ತು ಜ್ಞಾನ ದೊರೆಯುತ್ತದೆ ಎಂಬ ಭಕ್ತರ ನಂಬಿಕೆ. 

ಕೊಲ್ಹಾಪುರದಲ್ಲಿ ನೆಲೆಸಿರುವ  ಮಹಾಲಕ್ಷ್ಮೀ ದೇವಿಯನ್ನ ಅಂಬಾಬಾಯಿ ಯಾಗಿ ಪೂಜಿಸುವ ಈ ಶಕ್ತಿಪೀಠದಲ್ಲಿ,  ಮಹಾಲಕ್ಷ್ಮಿಯು  ಭಗವಾನ್ ಮಹಾವಿಷ್ಣುವಿನ ಜೊತೆಗೆ ನೆಲೆಸಿದ್ದಾಳೆ. ದೇವಿಯು ಸದಾ ಚಿನ್ನದ ಆಭರಣಗಳಿಂದ ಅಲಂಕೃತಳಾಗಿದ್ದು ಭಕ್ತರನ್ನ ಆಶೀರ್ವಾದಿಸುತ್ತಿರುತ್ತಾಳೆ
 
ಸೂರ್ಯನೂ ವಂದಿಸುವ ಅಂಬಾಬಾಯಿ -
ಇದು ಕಿರಣೋತ್ಸವದ ಮಹಿಮೆ

ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯದ ಅಪರೂಪದ ಅದ್ಭುತವೇ ಕಿರಣೋತ್ಸವವರ್ಷದಲ್ಲಿ ಕೇವಲ ಮೂರು ದಿನ ಮಾತ್ರ, ಸೂರ್ಯನ ಕಿರಣಗಳು ನೇರವಾಗಿ  ಅಂಬಾಬಾಯಿ ಯಾಗಿರುವ ಮಹಾಲಕ್ಷ್ಮಿ ಅಮ್ಮನವರ ಮುಖದ ಮೇಲೆ ಬೀಳುವಂತೆ ದೇವಾಲಯವನ್ನು ನಿರ್ಮಿಸಲಾಗಿದೆ. ಪುರಾತನ ಕಾಲದ ಜ್ಯೋತಿಷ್ಯ ಮತ್ತು ವಿಜ್ಞಾನ ಜ್ಞಾನಕ್ಕೆ ಇದು ಜೀವಂತ ಸಾಕ್ಷಿ ಎಂದು ಭಕ್ತರು ಮತ್ತು ಇತಿಹಾಸಕಾರರು ಹೇಳುತ್ತಾರೆ.

 
ಕೊಲ್ಹಾಪುರದಮಹಾಲಕ್ಷ್ಮಿ ದೇವಿಯ ದರ್ಶನ ಮಾಡಿದ ನಂತರ ಭಕ್ತರು, ನೆನಪಿಗಾಗಿ ಅಂಗಡಿಗಳಲ್ಲಿ ಸಣ್ಣ ಕೊಲ್ಹಾಪುರ ಚಪ್ಪಲಿಗಳನ್ನು ಕರೀದೀ ಮಾಡುತ್ತಾರೆ.  ಈ ಪುಟ್ಟ ಚಪ್ಪಲಿಗಳನ್ನು ಮನೆ ಯಲ್ಲಿ ಇಟ್ಟರೆ ಶುಭ, ಸಮೃದ್ಧಿ ಬರುತ್ತದೆ ಎಂಬ ನಂಬಿಕೆ ಇದೆ.  


ಈ ಚಿಕ್ಕ ಚಪ್ಪಲಿಗಳು ಕೊಲ್ಹಾಪುರದ ಶತಮಾನಗಳ ಹಸ್ತಪ್ರತಿ ಪರಂಪರೆಯ ಸಂಕೇತ ಹಾಗೂ
ನೀವುಗಳು ಸುಲಭವಾಗಿ ತೆಗೆದುಕೊಂಡು ಹೋಗಿ ಅಲಂಕಾರ ಕ್ಕಾಗಿ ಅಥವಾ ಉಡುಗೊರೆಯಾಗಿ ಬಳಸ ಬಹುದು.  

ದೊಡ್ಡ ಚಪ್ಪಲಿಗಳಿಗಿಂತ ಕಡಿಮೆ ಬೆಲೆಯ ಈ ಚಪ್ಪಲಿಗಳು ಎಲ್ಲರಿಗೂ ಲಭ್ಯವಾಗುವ ಸಾಂಸ್ಕೃತಿಕ ನೆನಪು.  

ಫುಲ್ ವಿಡಿಯೋವನ್ನ ನೋಡಿ ಗಿರೀಶ್ ಪ್ರಧಾನ Gireesh Pradhan ಯೂಟ್ಯೂಬ್ ಚಾನೆಲ್ನಲ್ಲಿ ಹಾಗೂ  ಈ ಪೇಜ್‌ನ್ನು ಫಾಲೋ ಮಾಡಿ.

ಶ್ರೀ ಮಹಾಲಕ್ಷಮೈ ನಮಃ


ಪ್ರವಾಸಿಗರ ಉಪಯುಕ್ತಾ ಮಾಹಿತಿ

ದೇವಸ್ಥಾನದ ವಿಳಾಸ
ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಮಹಾದ್ವಾರ ರೋಡ್, ಕೊಲ್ಹಾಪುರ, ಮಹಾರಾಷ್ಟ್ರ -416012

ದೇವಸ್ಥಾನಕ್ಕೆ ತಲುಪುವುದು ಹೇಗೆ: 
ಕೊಲ್ಲಾಪುರದ ರೈಲ್ವೆ ನಿಲ್ದಾಣದಿಂದ ~5 ಕಿ.ಮೀ. ಆಟೋ, ಟ್ಯಾಕ್ಸಿ ಅಥವಾ ಸ್ಥಳೀಯ ಬಸ್ ಮೂಲಕ ದೇವಸ್ಥಾನಕ್ಕೆ ಸುಲಭವಾಗಿ ತಲುಪಬಹುದು.

ದರ್ಶನ ಸಮಯ:  
ಬೆಳಿಗ್ಗೆ 4:30 – ಮುಂಜಾನೆ ದರ್ಶನ  
8:00 PM – ಶೇಜ್ ಆರತಿ

ನೋಡಲೇಬೇಕಾದ ಸ್ಥಳಗಳು
ಮಹಾಲಕ್ಷ್ಮೀ ದೇವಸ್ಥಾನ,  ಭವಾನಿ ಮಂಡಪ,   
ಚಪ್ಪಲಿ ಮಾರುಕಟ್ಟೆ ಗಳು, ನ್ಯೂ ಪ್ಯಾಲೇಸ್ ಮ್ಯೂಸಿಯಂ , ರಂಕಾಲಾ ತಾಳಬಂಡಿ 

ದರ್ಶನ ಹೀಗೆ ಮಾಡಿ

- ಅಂಬಾಬಾಯಿಗೆ ನಿಮ್ಮ ಹರಕೆಯನ್ನ ಸಲ್ಲಿಸಿ  
- ಭವಾನಿ ಮಂಡಪ 
- ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ  
- ಚಪ್ಪಲಿ ಮಾರುಕಟ್ಟೆಯನಾ ಬೇಟಿ ಮಾಡಿ ಹಾಗೂ ಖರೀದಿ ಮಾಡಿ  

ಈ ಆಹಾರ ಗಳನ್ನ ಟ್ರೈ ಮಾಡಿ
ಕೊಲ್ಲಾಪುರ ಮಿಸಲ್   ತಾಂಡ್ಲಾ ಭಾಕರಿ, ಪಿತ್ಲಿ, 

ವಾಸದ ಆಯ್ಕೆಗಳು
Hotel Sayaji Kolhapur – ಕುಟುಂಬಗಳಿಗೆ ಸೂಕ್ತ  

ಹೆಚ್ಚಿನ ಮಾಹಿತಿಗಾಗಿ ಈ ಪೇಜ್ಗ  ಗಳನ್ನು ನೋಡಿ

ಕೊಲ್ಲಾಪುರ ವಿಸ್ಮಯಗಳು,
ಮಹಾಲಕ್ಷ್ಮಿ ದೇವೀಯ ದಿವ್ಯ ಕಥೆ, 
ಅಂಬಾಬಾಯಿ ದರ್ಶನದ ನೆನಪಿಗ ಸಣ್ಣ ಕೊಲ್ಹಾಪುರ ಚಪ್ಪಲಿ – ಪರಂಪರೆ ಮತ್ತು ಶುಭದ ಸಂಕೇತ!

#KolhapurMahalakshmi 
#KannadaTravel 
#AmbabaiDarshan 
#TempleGuide 
#FoodTrail 
#ShaktiPeethaYatra 
#KolhapurChappal 
#SpiritualYatra 
#TempleTourIndia #

Post a Comment

0 Comments