Bhimashankar Jyotirlinga Darshan – One of the 12 Sacred Jyotirlingas of Lord Shiva
Bhimashankar Jyotirlinga Darshan
ದರ್ಶನ ಅನುಭವ ಮತ್ತು ಆಧ್ಯಾತ್ಮಿಕ ವಾತಾವರಣ
ಭೀಮಾಶಂಕರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿರುವ ಭಾರತದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು.
ಪುರಾಣಗಳ ಪ್ರಕಾರ, ಇಲ್ಲಿ ಭೀಮಾಸುರ ಎಂಬ ಅಸುರನು ತಪಸ್ಸಿನಿಂದ ಪಡೆದ ಶಕ್ತಿಯಿಂದ ಲೋಕವನ್ನು ಕಾಡುತ್ತಿದ್ದನು. ಭಕ್ತರ ಬೇಡಿಕೆಯಂತೆ, ಶಿವನು ಭೀಮಾಸುರನನ್ನು ಸಂಹರಿಸಿ, ಈ ಪವಿತ್ರ ಸ್ಥಳದಲ್ಲಿ ಭೀಮಾಶಂಕರ ಜ್ಯೋತಿರ್ಲಿಂಗವಾಗಿ ಸ್ಥಿರನಾದನು.
ಭೀಮಾಶಂಕರ ಜ್ಯೋತಿರ್ಲಿಂಗವನ್ನ ಭಕ್ತರು ಕೈಯಿಂದ ನೇರವಾಗಿ ಶಿವಲಿಂಗಕ್ಕೆ ಅಭಿಷೇಕ, ಅರ್ಚನೆ ಹಾಗೂ ಸ್ಪರ್ಶ ದರ್ಶನ ಮಾಡುವ ಅವಕಾಶವಿದೆ, ಭೀಮಾಶಂಕರನ ದರ್ಶನ ಭಾಗ್ಯದಿಂದ ಭಕ್ತರಿಗೆ ಶಕ್ತಿ ಮತ್ತು, ಧೈರ್ಯ ದೊರೆಯುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.
ಭೀಮಾ ಶಂಕರ್ ಜ್ಯೋತಿರ್ಲಿಂಗ ದೇವಸ್ಥಾನವು ಮುಂದಿನ ಮೂರು ತಿಂಗಳ ಕಾಲ ದರ್ಶನವನ್ನ ಭಕ್ತಾದಿಗಳಿಗೆ ಮುಚ್ಚಲಾಗಿದೆ
ಭೀಮಾಶಂಕರ್ ಜ್ಯೋತಿರ್ಲಿಂಗ ದೇವಸ್ಥಾನವು 2026ರ ಜನವರಿ 9ರಿಂದ ಮೂರು ತಿಂಗಳು ಸಾಮಾನ್ಯ ದರ್ಶನಕ್ಕೆ ಮುಚ್ಚಲ್ಪಟ್ಟಿದೆ. ದೇವಸ್ಥಾನ ಟ್ರಸ್ಟ್ ಪುನರ್ ನಿರ್ಮಾಣ, ದರ್ಶನ ವ್ಯವಸ್ಥೆ ಸುಧಾರಣೆ ಹಾಗೂ ಭಕ್ತರ ಸೌಲಭ್ಯಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಈ ಅವಧಿಯಲ್ಲಿ ದೈನಂದಿನ ಪೂಜೆ, ಅಭಿಷೇಕ ಮತ್ತು ವಿಧಿವಿಧಾನಗಳು ಒಳಾಂಗಣದಲ್ಲಿ ನಿರಂತರವಾಗಿ ನಡೆಯುತ್ತವೆ, ಆದರೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.l
ಮಹಾಶಿವರಾತ್ರಿ ದಿನಗಳಲ್ಲಿ ಮಾತ್ರ ವಿಶೇಷ ಪೂಜೆ ಹಾಗೂ ಸೀಮಿತ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತರು ಮುಂಚಿತ ನೋಂದಣಿಯ ಮೂಲಕ ಭಾಗವಹಿಸಬಹುದು. ಏಪ್ರಿಲ್ 2026ರಲ್ಲಿ ದೇವಸ್ಥಾನವು ಪುನಃ ಸಂಪೂರ್ಣವಾಗಿ ತೆರೆಯಲ್ಪಟ್ಟು ಸಾಮಾನ್ಯ ದರ್ಶನ ಆರಂಭವಾಗಲಿದೆ.
ಭೀಮಾಶಂಕರ್ ದೇವಸ್ಥಾನದ ಸುತ್ತಮುತ್ತ ಇರುವ ಶಾಂತ ಮತ್ತು ಆಧ್ಯಾತ್ಮಿಕ ಸ್ಥಳಗಳು
ಕಾಡಿನ ಮಧ್ಯೆ ಹೋಗುವ ಸಣ್ಣ ದಾರಿಗಳು ಪ್ರಕೃತಿಯ ಜೊತೆ ಮಾತನಾಡುವ ಅನುಭವ ಕೊಡುತ್ತವೆ. ಇಲ್ಲಿ ಪಕ್ಷಿಗಳ ಧ್ವನಿ, ಗಾಳಿಯ ಸದ್ದು ಮಾತ್ರ ಕೇಳಿಸುತ್ತದೆ. Bhimashankar ಕೇವಲ ಮಂದಿರವಲ್ಲ, ಅದು ಒಂದು ಸಂಪೂರ್ಣ ಆಧ್ಯಾತ್ಮಿಕ ಪ್ರದೇಶ. ಮಂದಿರದ ಸುತ್ತಮುತ್ತ ಕೆಲವು ಕಡಿಮೆ ಪರಿಚಿತ ಆದರೆ ಶಾಂತಿಯುತ ಸ್ಥಳಗಳಿವೆ. ಕುಂಡಗಳು ಮತ್ತು ಸಣ್ಣ ಘಾಟ್‌ಗಳು
ಮಂದಿರದ ಸಮೀಪದಲ್ಲೇ ಇರುವ ಪವಿತ್ರ ಕುಂಡಗಳು ಭಕ್ತರಿಗೆ ಧ್ಯಾನ ಮತ್ತು ಶಾಂತಿಗಾಗಿ ಉತ್ತಮ ಸ್ಥಳ. ಇಲ್ಲಿ ಜನಜಂಗುಳಿ ಕಡಿಮೆ, ಶಬ್ದವಿಲ್ಲದೆ ಕುಳಿತು ಮನಸ್ಸನ್ನು ನೆಮ್ಮದಿಗೊಳಿಸಬಹುದು.
ಶಾಂತ ಅರಣ್ಯ ಮಾರ್ಗಗಳು, ಕಡಿಮೆ ತಿಳಿದ viewpoint ಗಳು, ಬೆಳಿಗ್ಗೆ ಅಥವಾ ಸೂರ್ಯಾಸ್ತ ಸಮಯದಲ್ಲಿ ಈ ಸ್ಥಳಗಳಿಂದ ಕಾಣುವ ಬೆಟ್ಟಗಳ ದೃಶ್ಯ ಅದೆಷ್ಟು ಸುಂದರವೆಂದರೆ, ಕ್ಯಾಮರಾ ಹಿಡಿಯದೇ ಇರಲು ಆಗುವುದೇ ಇಲ್ಲ.
ಭೀಮಾಶಂಕರ್ ಜ್ಯೋತಿರ್ಲಿಂಗದ ದರ್ಶನ ಕ್ಕೆ ಬಜೆಟ್ ಟ್ರಿಪ್ ಗೈಡ್.
ಮಹಾರಾಷ್ಟ್ರ ಭೀಮಾಶಂಕರ್ ಜ್ಯೋತಿರ್ಲಿಂಗದ ದರ್ಶನನಾ ಅತಿ ಕಡಿಮೆ ಬಜೆಟ್ ನಲ್ಲಿನ ದರ್ಶನ ಮಾಡಬಹುದು.
ಬೆಂಗಳೂರಿಂದ ಪ್ರಯಾಣ ಮಾಡ್ತಿದ್ರೆ ಮೊದಲು ಬೆಂಗಳೂರು ಟು ಪುಣೆ ಸ್ಲೀಪರ್ ಕ್ಲಾಸ್ ರೈಲಿನಲ್ಲಿ ಹೋಗಿ (ಟಿಕೆಟ್ ಸುಮಾರು ₹500) ಅಲ್ಲಿ ಇಳಿದ ನಂತರ ಪುಣೆ ಬಸ್ ನಿಲ್ದಾಣಕ್ಕೆ ಬಂದು ಭೀಮಾಶಂಕರ್‌ಗೆ MSRTC ಬಸ್ ಹಿಡಿಯಬಹುದು ( ಟಿಕೆಟ್ ₹220). ಭೀಮಾಶಂಕರ ಪಾರ್ಕಿಂಗ್ ಪ್ಲೇಸನಿಂದ ಲೋಕಲ್ ಆಟೋದಲ್ಲಿ ಹೋಗಿ ಸ್ವಲ್ಪ ದೂರ ನಡೀಬೇಕಾಗುತ್ತೆ.
ಭೀಮಾಶಂಕರ್ ನ ದರ್ಶನಕ್ಕೆ ಯಾವುದೇ ಶುಲ್ಕವಿಲ್ಲ ಹಾಗಾಗಿ ಸಾಮಾನ್ಯ ದರ್ಶನ ಉಚಿತ. VIP ದರ್ಶನ ಪಾಸ್ ಬೇಕಾದರೆ ( ₹200–₹300 ) ಪೇ ಮಾಡಬೇಕು. ರೋಡ್ ಸೈಡ್ನಲ್ಲಿ ಸಿಗೋ ಫುಡ್ ಟ್ರೈ ಮಾಡಬಹುದು.(₹100–₹150). ಸ್ಟೇ ಮಾಡಬೇಕು ಅಂದರೆ MTDC ಯಾತ್ರಿನಿವಾಸ್‌ನಲ್ಲಿ ಸ್ಟೇ ( ₹500) ಮಾಡಬಹುದು. . ಸರಿಯಾಗಿ ಪ್ಲಾನ್ ಮಾಡಿದರೆ ಕಡಿಮೆ ಬಜೆಟ್‌ನಲ್ಲೇ ಭೀಮಾಶಂಕರನ ದರ್ಶನ ಅರಾಮವಾಗಿ ಮಾಡಬಹುದು.
ಭೀಮಾಶಂಕರ್ ಮಂದಿರದ ಬಳಿ ಇರುವ ಉತ್ತಮ ಊಟದ ಸ್ಥಳಗಳು ಮತ್ತು ಸರಳ ಹೋಟೆಲ್‌ಗಳು
Bhimashankar ಸುತ್ತಮುತ್ತ ಬಹಳ ಫ್ಯಾನ್ಸಿ ರೆಸ್ಟೋರೆಂಟ್‌ಗಳು ಇಲ್ಲ. ಆದರೆ ಇಲ್ಲಿ ಸಿಗುವ ಸರಳ ಮಹಾರಾಷ್ಟ್ರಿಯನ್ ಆಹಾರ ತುಂಬಾ ರುಚಿಕರ. ಪ್ರಸಾದ ಮತ್ತು ಸ್ಥಳೀಯ ಊಟ, ಸರಳ ಥಾಳಿ, ಪಿತ್ಲೆ-ಭಾಕ್ರಿ, ವಡಾ, ಪೋಹಾ ಬಿಸಿ ಚಹಾ ಈ ಆಹಾರಗಳು ಪ್ರಯಾಣದ ದಣಿವು ಕಡಿಮೆ ಮಾಡುತ್ತವೆ ಮತ್ತು ಆರೋಗ್ಯಕರವಾಗಿಯೂ ಇರುತ್ತವೆ.
Best Budget & Comfortable Stays Near Bhimashankar Temple
ದರ್ಶನಕ್ಕಾಗಿ ಒಂದು ರಾತ್ರಿ ಉಳಿಯಬೇಕೆಂದರೆ ಹಲವು ಆಯ್ಕೆಗಳಿವೆ. ಧರ್ಮಶಾಲೆಗಳು, ಕಡಿಮೆ ದರ,
ಭಕ್ತರಿಗೆ ಅನುಕೂಲ ಸ್ವಚ್ಛತೆ ಸಮರ್ಪಕ ಲಾಜ್ ಮತ್ತು ಬಜೆಟ್ ಹೋಟೆಲ್‌ಗಳು Ellora–Verul ಪ್ರದೇಶದ ಬಳಿ
ಕುಟುಂಬಗಳಿಗೆ ಸೂಕ್ತ ಮುಂಚಿತ ಬುಕ್ಕಿಂಗ್ ಮಾಡಿದರೆ ಉತ್ತಮ ಐಷಾರಾಮಿ ಅಲ್ಲದಿದ್ದರೂ, ವಿಶ್ರಾಂತಿಗೆ ಸಾಕಷ್ಟು ಅನುಕೂಲ ಸಿಗುತ್ತದೆ.
Bhimashankar Temple – Cinematic Spiritual Journey
Bhimashankar ಒಂದು cinematic ಅನುಭವ ನೀಡುವ ಸ್ಥಳ. ಬೆಳಗಿನ ಮಂಜಿನಲ್ಲಿ ಕಾಣುವ ಮಂದಿರ, ನಿಧಾನವಾಗಿ ನಾದಿಸುವ ಘಂಟೆಗಳ ಧ್ವನಿ, ಭಕ್ತರ ಮೌನ ಪ್ರಾರ್ಥನೆ – ಇವೆಲ್ಲವೂ ಮನಸ್ಸಿಗೆ ಆಳವಾಗಿ ತಾಕುತ್ತವೆ.
ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ತೆಗೆದ ದೃಶ್ಯಗಳು spiritual reels ಗೆ ಅತ್ಯುತ್ತಮ. ನಿಧಾನ ಚಲನೆಯ ದೃಶ್ಯಗಳು, ಕಾಡಿನ ಗಾಳಿ, ಮಂತ್ರಘೋಷ – ಎಲ್ಲವೂ ಸೇರಿ ಒಂದು ಆಧ್ಯಾತ್ಮಿಕ ಕಥೆ ಹೇಳುವಂತೆ ಕಾಣುತ್ತದೆ.
Bhimashankar Temple Darshan Tips & FAQs – Dress Code, Timing, Rules.
ಭೀಮಾಶಂಕರ ಜ್ಯೋತಿರ್ಲಿಂಗ ದರ್ಶನಕ್ಕೆ ಹೋಗುವ ಭಕ್ತರು ತಿಳಿಯಬೇಕಾದ ಕೆಲವು ಮುಖ್ಯ ವಿಷಯಗಳು, ಬೆಳಿಗ್ಗೆ ಬೇಗ ಬಂದರೆ ಕ್ಯೂ ಕಡಿಮೆ, ಹಬ್ಬದ ದಿನಗಳಲ್ಲಿ ಹೆಚ್ಚು ಜನ ಇರುತ್ತಾರೆ. Dress Code ಸರಳ ಮತ್ತು ಗೌರವಯುತ ಉಡುಪು ಅಗತ್ಯ, ಪರುಷರ ಶಾರ್ಟ್ ಅಲೋ ಮಾಡಲ್ಲ, ಗರ್ಭಗುಡಿಯಲ್ಲಿ ಮೊಬೈಲ್ ಮತ್ತು ಕ್ಯಾಮರಾ ನಿಷೇಧ ಹೂರಾಂಗಣದಲ್ಲಿ ಮಾತ್ರ ಫೋಟೋ ಅವಕಾಶ ಬೆಸ್ಟ್ ಟೈಮ್ ಟು ವಿಸಿಟ್ ಸೆಪ್ಟೆಂಬರ್ ನಿಂದಾ ಫೆಬ್ರವರಿ.
ನೀವು Bhimashankar ಗೆ ಹೋಗಲು ಯೋಜನೆ ಮಾಡುತ್ತಿದ್ದರೆ, ಈ ಮಾಹಿತಿಯನ್ನು bookmark ಮಾಡಿ.
ಹೊಸ ಅಪ್ಡೇಟ್‌ಗಳು ಅಥವಾ ಅನುಭವಗಳಿದ್ದರೆ ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ.
ದರ್ಶನದ ವೇಳೆ.
ಭೀಮಶಂಕರ ಜ್ಯೋತಿರ್ಲಿಂಗ ದೇವಾಲಯವು ದಿನ ಪ್ರತಿ ತೆಗೆದಿದ್ದು ಪ್ರತಿದಿನ ಬೆಳಗ್ಗೆ ಸುಮಾರು 4:30ಕ್ಕೆ ಕರೆಯಲಾಗುತ್ತದೆ ಹಾಗೂ ರಾತ್ರಿ 9:30 ಕ್ಕೆ ಮುಚ್ಚಲಾಗುತ್ತದೆ
ಪೂಜೆ ಹಾಗೂ ಆರತಿ ಕಾರ್ಯಕ್ರಮಗಳು
ಬೆಳಗ್ಗೆ 4:30ಕ್ಕೆ ಕಾಕಡ ಆರತಿ
ಬೆಳಗ್ಗೆ 5:00 ಗಂಟೆಗೆ ನಿಜರೂಪ ದರ್ಶನ
ಐದು ಮೂವತ್ತಕ್ಕೆ ದಿನದ ಪೂಜೆ ಹಾಗೂ ಅಭಿಷೇಕ ಮಧ್ಯಾಹ್ನ 12 ಗಂಟೆಗೆ ನೈವೇದ್ಯ ಪೂಜಾ ಕಾರ್ಯಕ್ರಮಗಳು
12:30 ಕ್ಕೆ ಪೂಜಾ ಮತ್ತು ಅಭಿಷೇಕ ಮೂರು ಗಂಟೆಗೆ ಸಂಜೆ ಮಧ್ಯಾಹ್ನದ ಆರತಿ ಹಾಗೂ ಸಂಜೆ
7.30 ಕ್ಕೆ ಸಂಜೆ ಆರತಿ
ಭೀಮಾಶಂಕರದ ಬಗ್ಗೆ ನಿಮಗಿದು ತಿಳಿದಿರಲಿ
ಭೀಮಶಂಕರ ಜ್ಯೋತಿರ್ಲಿಂಗವನ್ನ ಭೇಟಿ ಮಾಡಲು ಉತ್ತಮವಾದ ಸಮಯ ಯಾವುದು?
ಭೀಮಶಂಕರ ಜ್ಯೋತಿರ್ಲಿಂಗವನ್ನು ನೀವು ಅಕ್ಟೋಬರ್ ನಿಂದಾ ಮಾರ್ಚ್ ವರೆಗೂ ಭೇಟಿ ಮಾಡಲು ಉತ್ತಮ ಸಮಯ ಹಾಗೂ ಮಹಾರಾತ್ರಿ ಸಮಯದಲ್ಲಿ ವಿಶೇಷ ಪೂಜೆಗಳ ನಡೆಯುವುದರಿಂದ ನೀವು ದರ್ಶನ ಮಾಡಿದರೆ ಪುಣ್ಯ ಫಲ ಉಂಟಾಗುವುದು ಆದರೆ ಹೆಚ್ಚು ಜನಗಳಿರುವುದರಿಂದ ನೀವು ಮೊದಲೇ ಬುಕಿಂಗ್ ಮಾಡಿಕೊಂಡರೆ ಒಳ್ಳೆಯದು.
ಭೀಮಾಶಂಕರ ಜ್ಯೋತಿರ್ಲಿಂಗದ ಹತ್ತಿರದ ವಿಮಾನ ನಿಲ್ದಾಣ ಯಾವುದು?
ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೀವು ಭೀಮಾಶಂಕರವನ್ನು ತಲುಪಬಹುದು, ಪುಣೆಯಿಂದ ನೀವು ಲೋಕಲ್ ಬಸ್ಗಳ ಮೂಲಕ ಭೀಮಾಶಂಕರ ತಲುಪಬಹುದು.
ಭೀಮಾ ಶಂಕರ ಜ್ಯೋತಿರ್ಲಿಂಗ ದರ್ಶನ ಮಾಡಕ್ಕೆ ಬೆಂಗಳೂರಿನಿಂದ ರೈಲ್ ವ್ಯವಸ್ಥೆ ಇದೆಯೇ ?
ಹೌದು. ರೈಲ್ವೆ ವ್ಯವಸ್ಥೆಗಳು ಇದಾವೆ ಆದರೆ ನೀವು ಬೆಂಗಳೂರಿನಿಂದ ರೈಲು ಮೂಲಕ ಪುಣೆ ತಲುಪಿ ಅಲ್ಲಿಂದ ನೀವು ಲೋಕಲ್ ಬಸ್ ಅಥವಾ ಟ್ಯಾಕ್ಸಿ ಮೂಲಕ ಭೀಮಶಂಕರಕ್ಕೆ ತಲುಪಬೇಕು.
ಪುಣೆಯಿಂದ ಭೀಮಶಂಕರ ಜ್ಯೋತಿರ್ಲಿಂಗ ಎಷ್ಟು ದೂರ?
ನೀವು ಬೆಂಗಳೂರಿನಿಂದ ಪುಣೆಗೆ ವಿಮಾನದ ಮೂಲಕ ತಲುಪಬಹುದು ಅಲ್ಲಿಂದ ಸುಮಾರು 150 ಕಿಲೋ ಮೀಟರ್ ದೂರ ಇರುವುದರಿಂದ ನೀವು ಬಸ್ ಅಥವಾ ಟ್ಯಾಕ್ಸಿ ಮೂಲಕ ಭೀಮಾಶಂಕರಕ್ಕೆ ಸಲುವಾಗಿ ಹೋಗಬಹುದು.
ಭಕ್ತಾದಿಗಳಿಗೆ ವಿಶೇಷ ವಿನಂತಿ ಸೋಮವಾರ ಶ್ರಾವಣ ಮಾಸ ಹಾಗೂ ಮಹಾಶಿವರಾತ್ರಿ ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಿರುವುದರಿಂದ ವಿಶೇಷ ಪೂಜೆಗಳು ಮತ್ತು ಹಲವಾರು ಅಭಿಷೇಕಗಳು ನಡೆಯುತ್ತಿರುತ್ತವೆ, ಮುಂಜಾಗ್ರತವಾಗಿ ದೇವಸ್ಥಾನದ ದರ್ಶನದ ಟಿಕೆಟ್ ಹಾಗೂ ರೂಮ್ ಗಳನ್ನು ಇತ್ಯಾದಿ ಮುಂಗಡ ಬುಕ್ ಮಾಡಿದರೆ ಸುಲಭವಾಗಿ ನೀವು ದರ್ಶನ ಮಾಡಿಕೊಂಡು ಬರಬಹುದು.
ಈ ಲೇಖನದ ಜೊತೆಗೆ ಭಿಮಾಶಂಕರದ ಹತ್ತಿರದ ಸ್ಥಳಗಳನ್ನ ನೀವು ನೋಡಬಹುದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತಿ.
👉 ಹೆಚ್ಚಿನ ಮಾಹಿತಿಗೆ:
[ಭೀಮಾಶಂಕರ ಜ್ಯೋತಿರ್ಲಿಂಗ ಮಹಿಮೆ ಇತಿಹಾಸ, ದರ್ಶನ ಮತ್ತು ಮಹತ್ವ](your-blog-link)
[Bhimashankar Jyotirling Closed for Darshan - up to April 2026](your-blog-link)
[ಮಹಾಶಿವರಾತ್ರಿ - ಕರ್ನಾಟಕದಲ್ಲಿ ಆಚರಣೆಗಳ ದಿನಾಂಕ, ಪೂಜೆ ವಿಧಾನ, ಮಹತ್ವ ಮತ್ತು ಉಪವಾಸ ನಿಯಮಗಳು](your-blog-link)
[ನಾಶಿಕ್ – ರಾಮಾಯಣದ ಜೀವಂತ ಅಧ್ಯಾಯಗಳ ನಗರ | ತಪ್ಪದೇ ಭೇಟಿ ನೀಡಬೇಕಾದ ಪವಿತ್ರ ಸ್ಥಳಗಳ ಸಂಪೂರ್ಣ ಮಾರ್ಗದರ್ಶಿ](your-blog-link)
[Bhimashankar Jyotirling Closed for Darshan - up to April 2026](your-blog-link)
[ಮಹಾಶಿವರಾತ್ರಿ - ಕರ್ನಾಟಕದಲ್ಲಿ ಆಚರಣೆಗಳ ದಿನಾಂಕ, ಪೂಜೆ ವಿಧಾನ, ಮಹತ್ವ ಮತ್ತು ಉಪವಾಸ ನಿಯಮಗಳು](your-blog-link)
[ನಾಶಿಕ್ – ರಾಮಾಯಣದ ಜೀವಂತ ಅಧ್ಯಾಯಗಳ ನಗರ | ತಪ್ಪದೇ ಭೇಟಿ ನೀಡಬೇಕಾದ ಪವಿತ್ರ ಸ್ಥಳಗಳ ಸಂಪೂರ್ಣ ಮಾರ್ಗದರ್ಶಿ](your-blog-link)
0 Comments
If you have any doubts let me know